ದೇಶರಾಹುಲ್ ಗಾಂಧಿ ಅನರ್ಹ ವಿಚಾರ: 'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ಮೋದಿ ವಿರುದ್ಧ ಶತೃಘ್ನ ಸಿನ್ಹಾ ಆಕ್ರೋಶ
ರಾಹುಲ್ ಗಾಂಧಿ ಅನರ್ಹ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಟಿಎಂಸಿ ಸಂಸದ ಶತೃಘ್ನ ಸಿನ್ಹಾ 'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ಟೀಕಿಸಿದ್ದಾರೆ.