Question Hour

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆ 45 ಗಂಟೆ, ರಾಜ್ಯಸಭೆ 31 ಗಂಟೆಗಳ ಕಾಲ ಕಾರ್ಯನಿರ್ವಹಣೆ: ಮಾಹಿತಿ
ದೈನಂದಿನ ಪ್ರತಿಭಟನೆಗಳು ಮತ್ತು ಆಗಾಗ್ಗೆ ಕಲಾಪ ಮುಂದೂಡಿಕೆಗಳು ಬಜೆಟ್ ಅಧಿವೇಶನದ ದ್ವಿತೀಯಾರ್ಧವನ್ನು ಅಡ್ಡಿಪಡಿಸುವ ಮೂಲಕ ಯೋಜಿತ ಅವಧಿಗಿಂತ ಕಡಿಮೆ ಅವಧಿಗೆ ಸಂಸತ್ತು ಕಾರ್ಯನಿರ್ವಹಿಸಿದೆ ಎಂದು ಚಿಂತಕರ ಚಾವಡಿ ಸಂಗ್ರಹಿಸಿದ ಮಾಹಿತಿ ತೋರಿಸಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ಸದನದಲ್ಲಿ ಇಲ್ಲದಿದ್ದರೆ ಹೇಗೆ?: ವಿಪಕ್ಷ ನಾಯಕರ ಅಸಮಾಧಾನ; ಆರೋಗ್ಯ ಸಚಿವರು ಆಸ್ಪತ್ರೆ ಸೇರಿದ್ದಾರೆ ಎಂದ ಸ್ಪೀಕರ್
ಅಧಿವೇಶನ ಕಲಾಪ ವೇಳೆ ಆಡಳಿತ ಪಕ್ಷ, ಪ್ರತಿಪಕ್ಷಗಳ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕೆಂಬ ನಿಯಮವಿದ್ದರೂ ಸರಿಯಾಗಿ ಕಲಾಪ ವೇಳೆ ಉಪಸ್ಥಿತರಿದ್ದು ಸಕ್ರಿಯವಾಗಿ ಭಾಗವಹಿಸುವ ಸದಸ್ಯರು ವಿರಳ. ಇನ್ನು ಕಲಾಪದಲ್ಲಿ ಗಂಭೀರ,ಆಗಬೇಕಾದ ಚರ್ಚೆಯ ವಿಷಯಗಳು ನಡೆಯುವುದು ಕೂಡ ಕಡಿಮೆಯೇ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ, ಶೂನ್ಯ ವೇಳ ರದ್ದು ನಿರ್ಣಯ ಅಂಗೀಕಾರ
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ವೇಳೆಯನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಯಾವುದೇ ವಿಚಾರದ ಚರ್ಚೆಯಿಂದ ಹಿಂದಕ್ಕೆ ಸರಿಯುವುದಿಲ್ಲ: ಪ್ರಶ್ನೋತ್ತರ ಅವಧಿ ರದ್ದು ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
ಯಾವುದೇ ವಿಚಾರದ ಚರ್ಚೆಯಿಂದ ಹಿಂದಕ್ಕೆ ಸರಿಯವುದಿಲ್ಲ. ಪ್ರತೀ ವಿಚಾರದ ಬಗ್ಗೆಯೂ ಚರ್ಚೆ ನಡೆಸಲು ಸಿದ್ದರಿದ್ದೇವೆಂದು ಹೇಳುವ ಮೂಲಕ ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಯನ್ನು ಮೊಟಕುಗೊಳಿಸಿದ ನಿರ್ಧಾರವನ್ನು ಕೇಂದ್ರ ಸರ್ಕಾರ ಸೋಮವಾರ ಸಮರ್ಥಿಸಿಕೊಂಡಿದೆ.

ಸಂಸತ್ ಮುಂಗಾರು ಅಧಿವೇಶನ: ಲೋಕಸಭೆ ಕಲಾಪ ಆರಂಭ: ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯಕ್ಕೆ ವಿಪಕ್ಷಗಳ ತೀವ್ರ ಖಂಡನೆ
ಮಹಾಮಾರಿ ಕೊರೋನಾ ವೈರಸ್ ಅಬ್ಬರದ ನಡುವೆಯೇ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

ಕೊರೋನಾ ಎಫೆಕ್ಟ್: ರಾಜ್ಯ ವಿಧಾನಸಭಾ ಅಧಿವೇಶನದಲ್ಲೂ ರದ್ದುಗೊಳ್ಳಲಿದೆಯೇ ಪ್ರಶ್ನೋತ್ತರ ಅವಧಿ?
ರಾಜ್ಯ ವಿಧಾನಮಂಡಲ ಅಧಿವೇಶನದಲ್ಲೂ ಸಂಸತ್ ಮಾದರಿಯಲ್ಲಿ ಪ್ರಶ್ನೋತ್ತರ ಅವಧಿಯನ್ನು ಕಡಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ಕೋವಿಡ್-19ನ್ನು ಒಂದು ನೆಪ ಮಾಡಿಕೊಂಡಿದೆ:ಎನ್ ಸಿಪಿ ಆರೋಪ
ತನ್ನ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲು ಬಿಜೆಪಿ ಕೋವಿಡ್-19ನ ಕಾರಣವನ್ನು ಒಂದು ನೆಪವಾಗಿ ತೆಗೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷ ಎನ್ ಸಿಪಿ ಆರೋಪಿಸಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ, ಖಾಸಗಿ ಮಸೂದೆ ಮಂಡನೆ ಇರುವುದಿಲ್ಲ, ಶೂನ್ಯ ಅವಧಿ ಮೊಟಕು!
ಕೊರೋನಾ ಆತಂಕದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಇದೇ ತಿಂಗಳ 14ರಿಂದ ಆರಂಭವಾಗುತ್ತಿದ್ದು ಈ ಬಾರಿ ಕಲಾಪ ಮಧ್ಯೆ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಖಾಸಗಿ ಮಸೂದೆಗಳ ಮಂಡನೆ ಕೂಡ ಇರುವುದಿಲ್ಲ, ಶೂನ್ಯ ಅವಧಿ ಮೊಟಕುಗೊಳಿಸಲಾಗಿದೆ ಎಂದು ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯಗಳು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿವೆ.

ಕಪ್ಪು ಹಣ: ಕೇಂದ್ರದ ವಿರುದ್ಧ ಟಿಎಂಸಿ, ಜೆಡಿಯು ಪ್ರತಿಭಟನೆ
ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ತೃಣಮೂಲ..

