ದೇಶನಡತೆ ಬಗ್ಗೆ ಅನುಮಾನ: ಚಲಿಸುತ್ತಿದ್ದ ರೈಲಿನ ಮುಂಭಾಗ ಪತ್ನಿ ತಳ್ಳಿ ಕೊಲೆಗೈದ ಪತಿಯ ಬಂಧನ
ಚಲಿಸುತ್ತಿದ್ದ ರೈಲೊಂದರ ಮುಂಭಾಗ ಪತ್ನಿಯನ್ನು ತಳ್ಳಿ ಕೊಲೆಗೈದ ಆರೋಪದ ಮೇರೆಗೆ ವ್ಯಕ್ತಿಯೊರ್ವನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಾಸೈ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.