ರಾಜ್ಯಮೈಸೂರು: ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಗ್ರಂಥಾಲಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ, ಭಗವದ್ಗೀತೆಯ 3,000 ಪ್ರತಿಗಳು ಭಸ್ಮ
ದುರಂತ ಘಟನೆಯೊಂದರಲ್ಲಿ, 62 ವರ್ಷ ವಯಸ್ಸಿನ ದೈನಂದಿನ ಕೂಲಿ ಕಾರ್ಮಿಕರೊಬ್ಬರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸುಟ್ಟು ಹೋದ ಗ್ರಂಥಾಲಯದಲ್ಲಿ ಭಗವದ್ಗೀತೆಯ ಮೂರು ಸಾವಿರ ಪ್ರತಿಗಳು ಸೇರಿದಂತೆ 11,000 ಪುಸ್ತಕಗಳ ಸಂಗ್ರಹವಿತ್ತು.