ರಾಜ್ಯಗಡಿಯಲ್ಲಿ ವಾಹನಗಳ ತಪಾಸಣೆ: ಟ್ರಾಫಿಕ್ ಜಾಮ್ ನಿಂದ ಕಿರಿಕಿರಿ; ಸಾರ್ವಜನಿಕರು, ಪ್ರವಾಸಿಗರಿಂದ ದೂರು
ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ನಗದು, ಬೆಲೆಬಾಳುವ ವಸ್ತುಗಳ ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸ್ಥಾಪಿಸಲಾದ ನೂರಾರು ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.