ರಾಜ್ಯಸದ್ಯಕ್ಕೆ ಹೊಸ ಪಿಎಸ್ಐ ನೇಮಕಾತಿ ಇಲ್ಲ: ಡಾ ಜಿ ಪರಮೇಶ್ವರ್
ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಬರೆಯಲು ಆಕಾಂಕ್ಷಿಗಳು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಕಾರಣ, ಹಿಂದಿನ ವರ್ಷದ ಪ್ರಕರಣ ಹೈಕೋರ್ಟ್ನಲ್ಲಿ ಬಾಕಿ ಇರುವ ಕಾರಣ ಪಿಎಸ್ಐ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಂದ ಸರ್ಕಾರ ಅರ್ಜಿ ಕರೆಯುವಂತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.