ದೇಶಸಂಸತ್ತಿನ ಇತಿಹಾಸದಲ್ಲಿ ಇಂದು ಕಳಂಕಿತ ದಿನ: ಖರ್ಗೆ ಪ್ರತಿಭಟನೆಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಕಿಡಿ
ಸದನವನ್ನು ಮುಂದೂಡಿದ ಬಳಿಕ ಹೊರಬಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 267ನೇ ನಿಯಮದ ಅಡಿಯಲ್ಲಿ ಸದನದಲ್ಲಿ ನೀಟ್ ಹಗರಣದ ಕುರಿತು ಚರ್ಚಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಧ್ವನಿ ಎತ್ತಲು ಬಯಸಿದ್ದೇವೆ ಎಂದು ಹೇಳಿದರು.