ರಾಜ್ಯಬಿಬಿಎಂಪಿ ಆಸ್ತಿ ತೆರಿಗೆ ಶೇ. 5 ರಷ್ಟು ರಿಯಾಯಿತಿ: ಜೂನ್ ಅಂತ್ಯದವರೆಗೂ ವಿಸ್ತರಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಶೇ. 5 ರಷ್ಟು ರಿಯಾಯಿತಿಯು ಜೂನ್ 30 ರವರೆಗೆ ವಿಸ್ತರಣೆಯಾಗಿದೆ. ಮೇ ಅಂತ್ಯಕ್ಕೆ ಮುಕ್ತಾಯವಾಗಬೇಕಿದ್ದ ರಿಯಾಯಿತಿ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡುವಂತೆ ಬಿಬಿಎಂಪಿ ಮಾಜಿ ಸದಸ್ಯರು ಮನವಿ ಮಾಡಿದ್ದರು.