ಬಾಲಿವುಡ್ಅಂದು 'ಪದ್ಮಾವತ್' ಇಂದು 'ಪೃಥ್ವಿರಾಜ್': ಅಕ್ಷಯ್ ಕುಮಾರ್ ಹೊಸ ಚಿತ್ರದ ಶೀರ್ಷಿಕೆ ಬದಲಾವಣೆಗೆ ಕರ್ಣಿ ಸೇನಾ ಆಗ್ರಹ!
ಸತ್ಯವನ್ನು ವಿರೂಪಗೊಳಿಸುವ ಕಾರಣ ನೀಡಿ ಸಂಜಯ್ ಲೀಲಾ ಭನ್ಸಾಲಿ ಅವರ 'ಪದ್ಮಾವತ್' ಬಿಡುಗಡೆ ಕುರಿತು ವಿವಾದ ಎಬ್ಬಿಸಿದ್ದ ಶ್ರೀ ರಜಪೂತ್ ಕರ್ಣಿ ಸೇನಾ ಇದೀಗ ನಟ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಚಿತ್ರ 'ಪೃಥ್ವಿರಾಜ್' ಕುರಿತು ತಕರಾರು ಎತ್ತಿದೆ. ಚಿತ್ರದ ಶೀರ್ಷಿಕೆ ಬದಲಾಯಿಸಬೇಕೆಂದು ಒತ್ತಾಯಿಸುತ್ತಿದೆ.