ರಾಜ್ಯಗದಗ: ಬರದ ನಡುವೆ ಜೋಳದ ಬೆಲೆ ದಿಢೀರ್ ಕುಸಿತ; ರೈತರಿಗೆ ನಷ್ಟ
ಕಳೆದ ಹತ್ತು ದಿನಗಳಿಂದ ಜೋಳದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಬರುತ್ತಿದ್ದು, ಗದಗ ರೈತರು ಕಂಗಾಲಾಗಿದ್ದಾರೆ. ಮೊನ್ನೆಯಷ್ಟೇ ಬ್ಯಾಡಗಿ ಮೆಣಸಿನಕಾಯಿ ದರ ಕುಸಿತದ ಹಿನ್ನೆಲೆಯಲ್ಲಿ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಇದೀಗ ಬರ ಪರಿಸ್ಥಿತಿಯ ನಡುವೆ ಜೋಳದ ಬೆಳೆಯು ಕುಸಿತ ಕಂಡಿದ್ದು, ರೈತರು ಸತತ ನಷ್ಟ ಎದುರಿಸುವಂತಾಗಿದೆ.