ರಾಜ್ಯಶಾಲೆ ನಡೆಸಲು ಅವಕಾಶ ಕೋರಿ ಪ್ರಿ ಸ್ಕೂಲ್ ಮುಖ್ಯಸ್ಥರ ನಿಯೋಗ ಶಿಕ್ಷಣ ಸಚಿವರಿಗೆ ಮನವಿ
ಬೆಂಗಳೂರಿನ ಪೂರ್ವ ಪ್ರಾಥಮಿಕ ಶಾಲೆ(ಪ್ರಿ ಸ್ಕೂಲ್)ಪ್ರತಿನಿಧಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಗುರುವಾರ ಭೇಟಿಯಾಗಿದ್ದು ಶೀಘ್ರದಲ್ಲೇ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕಡ್ದಾಯ ಮಾರ್ಗಸೂಚಿಗಳ ಜತೆಗೆ ತಾವು ತರಗತಿ ಪುನಾರಂಬ ಮಾಡುವುದಾಗಿ ಅವರು ಇದೇ ವೇಳೆ ಸಚಿವರಿಗೆ ಮನವರಿಕೆ ಮಾಡಿದ್ದಾರೆ.