ರಾಜ್ಯಆಟೋ ಚಾಲಕರ ಸುಲಿಗೆಗೆ ಬ್ರೇಕ್: ನಗರದಲ್ಲಿ ಶೀಘ್ರದಲ್ಲೇ 30 ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್'ಗಳು ಆರಂಭ!
ನಗರದಲ್ಲಿ ಆಟೋ ಚಾಲಕರು ಬೇಕಾಬಿಟ್ಟಿ ದುಡ್ಡು ಕೇಳುತ್ತಿದ್ದು, ಹಗಲು ದರೋಡೆ ಮಾಡುತ್ತಿದ್ದಾರೆ. ಇದಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಯಾಣಿಕರಿಗೆ ಈ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಂಡಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದು, ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್ ಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.