ವಿದೇಶಭಾರತ ಆಯೋಜನೆಯ ಜಿ-20 ಶೃಂಗಸಭೆ ಯಶಸ್ಸಿಗೆ ಎಲ್ಲಾ ರಾಷ್ಟ್ರಗಳೊಂದಿಗೆ ಶ್ರಮಿಸಲು ಸಿದ್ಧ: ಚೀನಾ
ಈ ಬಾರಿ ಜಿ 20 ಶೃಂಗಸಭೆ ಆಯೋಜಿಸುತ್ತಿರುವ ಭಾರತವನ್ನು ಬೆಂಬಲಿಸುವುದಾಗಿ ಚೀನಾ ಮಂಗಳವಾರ ಹೇಳಿದೆ. ನವದೆಹಲಿಯಲ್ಲಿ ಈ ವಾರದಿಂದ ನಡೆಯಲಿರುವ ಉನ್ನತ ಮಟ್ಟದ ಜಾಗತಿಕ ಸಮ್ಮೇಳನದ ಯಶಸ್ಸಿಗಾಗಿ ಎಲ್ಲಾ ರಾಷ್ಟ್ರಗಳೊಂದಿಗೆ ಶ್ರಮಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ.