ಸಿನಿಮಾ ಸುದ್ದಿಪ್ರಭಾಸ್ ಅಭಿನಯದ 'ಸಲಾರ್' ರೀ-ರೆಕಾರ್ಡಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್-ರವಿ ಬಸ್ರೂರ್ ಬ್ಯುಸಿ
'ಸಲಾರ್- ಸೀಸ್ ಫೈರ್' ಎಂಬ ಶೀರ್ಷಿಕೆಯ ಚಿತ್ರದ ಮೊದಲ ಭಾಗದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರಶಾಂತ್ ನೀಲ್ ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ಸದ್ಯ ಕುಂದಾಪುರದ ಬಸ್ರೂರು ಗ್ರಾಮದ ಲ್ಯಾಟರ್ಸ್ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.