ಸಿನಿಮಾ ಸುದ್ದಿSalaar: ಕನ್ನಡ ಸೇರಿ ಐದು ಭಾಷೆಗಳಲ್ಲೂ ಮಾಡಿದ ಪೃಥ್ವಿರಾಜ್ ಸುಕುಮಾರನ್ ಸ್ವತಃ ಡಬ್ಬಿಂಗ್!
ನಟ ಪ್ರಭಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಲಾರ್ ಚಿತ್ರವು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಡಿಸೆಂಬರ್ 22 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಬೆನ್ನಲ್ಲೇ ವರದ ಪಾತ್ರದಲ್ಲಿ ನಟಿಸಿರುವ ಪೃಥ್ವಿರಾಜ್ ಸುಕುಮಾರನ್ ತಮ್ಮ ಪಾತ್ರಕ್ಕಾಗಿ ಎಲ್ಲಾ ಐದೂ ಭಾಷೆಗಳಲ್ಲಿ ತಾವೇ ಧ್ವನಿ ನೀಡಿದ್ದಾರೆ.