ವಿಶೇಷಅಲೆಗಳಿಗೇ ಸವಾಲು: ಮಂಗಳೂರು ಯುವತಿ ದಿಟ್ಟ ಹೆಜ್ಜೆ; ಆಳ ಸಮುದ್ರ ಮೀನುಗಾರಿಕೆಯಲ್ಲಿ ಪ್ರಾಪ್ತಿ ಮೆಂಡನ್ ಸಾಧನೆ
26 ವರ್ಷದ ಪ್ರಾಪ್ತಿ ಮೆಂಡನ್ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದು, ಸಾಧನೆ ಮಾಡುತ್ತಿದ್ದಾರೆ. ಬೋಟ್ನಲ್ಲಿ ಪುರುಷ ಸಿಬ್ಬಂದಿಯೊಂದಿಗೆ ಸಮಾನವಾಗಿ ಕೆಲಸ ಮಾಡುತ್ತಾ, ಬಲೆ ಬೀಸುವುದು, ಬಲೆ ಎಳೆಯುವುದು, ಮೀನುಗಳನ್ನು ವಿಂಗಡಿಸುವುದು ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಾರೆ.