ರಾಜ್ಯಕನ್ನಡ ಭಾಷೆ ಕಲಿಯುವ ಆಸಕ್ತಿಯಿದೆಯೇ?: ಈ ವಿದ್ಯಾರ್ಥಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ನೆರವಾಗಬಹುದು
ಹೊರ ರಾಜ್ಯಗಳು, ಹೊರ ದೇಶಗಳಿಂದ ಬಂದ ಅನೇಕರಿಗೆ ಕನ್ನಡ ಕಲಿಯಲು ಆಸಕ್ತಿಯಿರುತ್ತದೆ. ಆದರೆ ಹೇಗೆ ಕಲಿಯುವುದೆಂದು ತಿಳಿದಿರುವುದಿಲ್ಲ. ಅಂಥವರಿಗೆ ತಮ್ಮ ಮನೆಯಲ್ಲಿಯೇ ಉಚಿತವಾಗಿ ಕನ್ನಡ ಕಲಿಯಲು ಪ್ರಜ್ವಲ್ ರೆಡ್ಡಿ ಎಂಬ 17 ವರ್ಷದ ವಿದ್ಯಾರ್ಥಿ ಒಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ.