PPE kit

ಚಾಮರಾಜನಗರ: ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಸಚಿವ ಸುರೇಶ್ ಕುಮಾರ್ ಭೇಟಿ; ರೋಗಿಗಳ ಆರೋಗ್ಯ ವಿಚಾರಣೆ
ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು.

ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಒಪಿಡಿ ವೈದ್ಯರಿಗೆ ಪಿಪಿಇ ಕಿಟ್ ಇಲ್ಲ!
ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಹೊರರೋಗ ವಿಭಾಗದ ವೈದ್ಯರು ಪಿಪಿಇ ಕಿಟ್ ಗಳಿಲ್ಲದೆ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ರೋಗಿಗಳಿಗೆ ವೈದ್ಯೋಪಚಾರ ಮಾಡುವ ಸಮಯದಲ್ಲಿ ತಮಗೆ ಎಲ್ಲಿ ಕೊರೋನಾ ಸೋಂಕು ತಗುಲುತ್ತದೋ ಎಂಬ ಭಯ ಈ ವೈದ್ಯರನ್ನು ಅಪಾರವಾಗಿ ಕಾಡುತ್ತಿದೆ.

ಎಲ್ಲೆಂದರಲ್ಲಿ ಮಾಸ್ಕ್, ಗ್ಲೌಸ್ ಎಸೆತ, ಪಿಪಿಇ ಕಿಟ್ ಗಳು: ಕೋವಿಡ್-19 ಜೊತೆಗೆ ಪರಿಸರಕ್ಕೂ ತೀವ್ರ ಹಾನಿ
ಇಂದಿನ ಕೋವಿಡ್-19 ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಸುರಕ್ಷತೆ ಜನರ ಬಹುಮುಖ್ಯ ಕಾಳಜಿಯಾಗಿದೆ. ಕೋವಿಡ್-19 ವೈರಾಣುವಿನಿಂದ ರಕ್ಷಿಸಿಕೊಳ್ಳಲು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಬಳಸುತ್ತಿರುವ ಪಿಪಿಇ ಕಿಟ್ ಗಳು, ಗ್ಲೌಸ್, ಮಾಸ್ಕ್, ಶೂ ಕವರ್ ಗಳು ಇಂದು ಪರಿಸರಕ್ಕೆ ಭಾರೀ ಹಾನಿಕಾರಕವಾಗಿ ಪರಿಣಮಿಸುತ್ತಿದೆ.

ತನ್ನ ಸುರಕ್ಷತೆಯನ್ನು ಲೆಕ್ಕಿಸದೆ ಪಿಪಿಇ ಕಿಟ್ ತೆಗೆದು ಕೊರೋನಾ ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆ ವೈದ್ಯ, 14 ದಿನಗಳ ಕ್ವಾರಂಟೈನ್ ಗೆ!
ಮಾರಕ ಕೊರೋನಾ ರೋಗಿಯ ಪ್ರಾಣ ಉಳಿಸಲು ತನ್ನ ರಕ್ಷಣೆಗೆ ಹಾಕಿಕೊಂಡಿದ್ದ ಪಿಪಿಇ ಕಿಟ್ ತೆಗೆದು ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆಯ ವೈದ್ಯನನ್ನು 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ.

ಉಡುಪಿ: ನದಿಯಲ್ಲಿ ಬಳಸಿದ ಪಿಪಿಇ ಪತ್ತೆ, ಪ್ರಕರಣ ದಾಖಲು
ಕೋವಿಡ್ -೧೯ ರೋಗಿಗಳ ಚಿಕಿತ್ಸೆ ವೇಳೆ ವೈದ್ಯರು ಧರಿಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ವಾಗಿರುವ ರಕ್ಷಾ ಕವಚವೊಂದು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಬಳಿಯ ನದಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರ ಈ ಕಾರ್ಯಕ್ಕೆ ಚಪ್ಪಾಳೆ ತಟ್ಟಲೇ ಬೇಕು!
ಕೊರೋನಾ ವಿರುದ್ಧ ತಮ್ಮ ಪತಿಯಂದಿರೊಂದಿಗೆ ಹೋರಾಟಕ್ಕೆ ಇಳಿದಿರುವ ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರು ಆರೋಗ್ಯ ಸೇವೆ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಕಿಟ್ ಗಳು ಮತ್ತು ಮಾಸ್ಕ್ ಗಳನ್ನು ವಿತರಿಸುತ್ತಿದ್ದಾರೆ.

