ರಾಜಕೀಯಅಧಿಕಾರದ ಹಪಾಹಪಿ: ಆಕಾಂಕ್ಷಿಗಳಿಂದ ಮುಂದುವರಿದ ಪಕ್ಷಾಂತರ ಪರ್ವ; ಮೂರು ಪಕ್ಷಗಳಿಗೂ ಹಾರಿ ನೆಗೆದ 'ಜಂಪಿಂಗ್ ಸ್ಟಾರ್ಸ್'!
ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಈ ಮದ್ಯೆ ತಾವು ಮೆಚ್ಚಿಕೊಂಡ ಪಕ್ಷಗಳು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಾಗೂ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಹಲವು ಆಕಾಂಕ್ಷಿಗಳು ಈಗಾಗಲೇ ಪಕ್ಷಾಂತರ ಪರ್ವ ಆರಂಭಿಸಿದ್ದಾರೆ.