ರಾಜ್ಯರಾಜಕೀಯ ದ್ವೇಷ ಭಾಷಣ ಬಗ್ಗೆ ಎಚ್ಚೆತ್ತುಕೊಳ್ಳಿ: ಚುನಾವಣಾ ಆಯೋಗಕ್ಕೆ ಪೋಸ್ಟ್ ಕಾರ್ಡ್ ಪ್ರತಿಭಟನಾ ಅಭಿಯಾನ
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಜಕಾರಣಿಗಳ ದ್ವೇಷದ ಭಾಷಣದ ಬಗ್ಗೆ ಭಾರತೀಯ ಚುನಾವಣಾ ಆಯೋಗದ (ECI) ಕ್ರಮ ಕೈಗೊಳ್ಳದಿರುವುದರ ವಿರುದ್ಧ ಧ್ವನಿ ಎತ್ತಿದ್ದು, ನಾಗರಿಕ ಸಮಾಜದ ಸದಸ್ಯರು ಮತ್ತು ನಾಗರಿಕರು ಪೋಸ್ಟ್ಕಾರ್ಡ್ ನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲು ಅಂಚೆ ಕಚೇರಿಗಳು ಮತ್ತು ಅಂಚೆ ಪೆಟ್ಟಿಗೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಬೆಂಗಳೂರು, ಮೈಸೂರು ಸೇರಿದಂತೆ ದೇಶದ 11 ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.