ರಾಜ್ಯರಾಜ್ಯದಲ್ಲಿ 200 ಕೋಟಿ ರೂ ವೆಚ್ಚದಲ್ಲಿ 100 ನೂತನ ಪೊಲೀಸ್ ಠಾಣೆಗಳ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
ಪೊಲೀಸ್ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕರ್ತವ್ಯದ ವೇಳೆ ಹುತಾತ್ಮರಾದ ಕರ್ನಾಟಕದಲ್ಲಿ 12 ಮಂದಿ ಸೇರಿದಂತೆ ದೇಶದಲ್ಲಿ 216 ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮುಖ್ಯಮಂತ್ರಿ, ಪೊಲೀಸರಿಗೆ ಮನೆ ನೀಡುವುದು ಸರ್ಕಾರದ ಕರ್ತವ್ಯ. 2025 ರ ವೇಳೆಗೆ 10,000 ವಸತಿ ಕ್ವಾರ್ಟಸ್ ನಿರ್ಮಿಸುತ್ತೇವೆ ಎಂದರು.