ರಾಜ್ಯಅವಧಿ ಮೀರಿ ಪಬ್ ನಲ್ಲಿ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ 8 ಮಂದಿಗೆ ಕ್ಲೀನ್ ಚೀಟ್
ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಎಲ್ಲಾ 8 ಮಂದಿಗೂ ಬಿಗ್ ರಿಲೀಫ್ ಸಿಕ್ಕಿದೆ. ರಾಜಾಜಿನಗರದ ಜೆಟ್ಲ್ಯಾಗ್ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.