ರಾಜ್ಯಬೆಂಗಳೂರು: 3.66 ಕೋಟಿ ರೂ. ಮೌಲ್ಯದ ಬಿಟ್ಕಾಯಿನ್ಗಳನ್ನು ಕಳವು ಮಾಡಿದ ಮಹಿಳೆ ಅರೆಸ್ಟ್
3.66 ಕೋಟಿ ರೂ. ಮೌಲ್ಯದ 64 ಬಿಟ್ಕಾಯಿನ್ಗಳನ್ನು ಕಳವು ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಬೆಂಗಳುರು ಸೈಬರ್ ಕ್ರೈಮ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಮಹಾದೇವಪುರದ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ ಬಿಟ್ಸಿಫರ್ ಲ್ಯಾಬ್ಸ್ನ ಮಾಲೀಕ ಆಶಿಶ್ ಸಿಂಘಾಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಯುಷಿ ಎಂಬಾಕೆಯನ್ನು ಬಂಧಿಸಿದ್ದಾರೆ.