ರಾಜಕೀಯಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ; ತವರು ರಾಜ್ಯದಲ್ಲಿ ಸಿಗದ ಹೆಚ್ಚಿನ ಬೆಂಬಲ, ರಾಜ್ಯ ಕಾಂಗ್ರೆಸ್ ಮೌನ!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷದ ಪ್ರಧಾನಿಯಾಗಿ ಬಿಂಬಿಸುವಂತೆ I.N.D.I.A ಮೈತ್ರಿ ಪಕ್ಷಗಳಿಗೆ ಸೂಚಿಸಿದಾಗ ಕರ್ನಾಟಕ ಕಾಂಗ್ರೆಸ್ ಸಂಭ್ರಮಿಸಲು ಎಲ್ಲ ಕಾರಣಗಳಿವೆ.