Pipeline

ಎತ್ತಿನಹೊಳೆ ಯೋಜನೆ ಪೈಪ್‌ಲೈನ್ ಸೋರಿಕೆ: ಬೆಳೆಗಳಿಗೆ ನುಗ್ಗಿದ ನೀರು, ರೈತರು ಕಂಗಾಲು
ಈ ಹಿಂದೆ ಯೋಜನೆ ಉದ್ಘಾಟನೆಗೂ ಮುನ್ನವೇ ಪೈಪ್‌ಲೈನ್ ಹಾಳಾಗಿತ್ತು. ಕಳಪೆ ಕಾಮಗಾರಿಯಿಂದ ಪೈಪ್‌ಲೈನ್ ಪದೇ ಪದೇ ಹಾಳಾಗುತ್ತಿದೆ. ನಿರಂತರವಾಗಿ ನೀರು ಪಂಪ್ ಮಾಡಿದ್ದರಿಂದ ಪೈಪ್‌ಲೈನ್ ಹಾಳಾಗಿದೆ ಎಂದು ಮೂಲಗಳು ತಿಳಿಸಿವೆ.

ಪೈಪ್‌ಲೈನ್ ಕಾಮಗಾರಿ ಅಪೂರ್ಣ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಡಿಯುವ ನೀರಿಗೆ ಸಮಸ್ಯೆ!
ಉದ್ಯಾನವನದ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಸುತ್ತಿದೆ. ಆದರೆ, ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಈ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದು, ಇದರಿಂದಾಗಿ ಯೋಜನೆ ವಿಳಂಬವಾಗಿದೆ ಎನ್ನಲಾಗಿದೆ.

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಘಟ್ಟಕ್ಕೆ; ಕೊನೆಯ ಪೈಪ್ ರವಾನೆ
ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಗಳು ಇಂದು ಗುರುವಾರ ಮುಂಜಾನೆ ಅಂತಿಮ ಹಂತಕ್ಕೆ ತಲುಪಿದ್ದು, ಕೊನೆಯ ಪೈಪ್ ನ್ನು ಪ್ರವೇಶಿಸಿ ಸಿಕ್ಕಿಬಿದ್ದ ಕಾರ್ಮಿಕರನ್ನು ಅವಶೇಷಗಳ ಮೂಲಕ ತಳ್ಳುವ ಮಾರ್ಗವನ್ನು ಸಿದ್ಧಪಡಿಸಲಾಗಿದೆ.

ಅಕ್ಟೋಬರ್‌ನಲ್ಲಿ ಎತ್ತಿನಹೊಳೆ ನೀರಿಗೆ ಟಿ.ಜಿ.ಹಳ್ಳಿ ಜಲಾಶಯ ಸಿದ್ಧ: ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಿಂದ ಪೈಪ್ ಲೈನ್ ವಿಳಂಬ
ಸಕಲೇಶಪುರ ತಾಲ್ಲೂಕಿನ ನೇತ್ರಾವತಿ ನದಿಯ ಉಪನದಿಯಾದ ಎತ್ತಿನಹೊಳೆಯಿಂದ ಬೆಂಗಳೂರಿಗೆ ಪ್ರತಿದಿನ 110 ಮಿಲಿಯನ್ ಲೀಟರ್ ಕುಡಿಯುವ ನೀರಿನ ಪೂರೈಕೆಯನ್ನು (MLD) ಮಾಡುವ ದೀರ್ಘಾವಧಿಯ ಯೋಜನೆ ಶೀಘ್ರದಲ್ಲಿಯೇ ಈಡೇರುವ ಭರವಸೆಯಿಲ್ಲ.

ಮಧುರೈ: 13 ಅಡಿ ಆಳದ ಗುಂಡಿಯೊಳಗೆ ಸಿಲುಕಿದ ಗುತ್ತಿಗೆ ಕಾರ್ಮಿಕ; ರಕ್ಷಣಾ ಕಾರ್ಯ ಪ್ರಗತಿಯಲ್ಲಿ
ಕುಡಾಲ್ ನಗರದ ಬಳಿ ಪೈಪ್‌ಲೈನ್ ಲಿಂಕ್ ಮಾಡುವ ಕಾಮಗಾರಿಯಲ್ಲಿ ತೊಡಗಿದ್ದ 35 ವರ್ಷದ ಗುತ್ತಿಗೆ ಕಾರ್ಮಿಕರೊಬ್ಬರು ಪೈಪ್‌ಲೈನ್‌ನಿಂದ ನೀರು ಸೋರಿಕೆಯಾಗಿ, ಮರಳು ಗೋಡೆ ಕುಸಿದು ಹೊಂಡದಲ್ಲಿ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿದೆ.

ಪೈಪ್ ನಲ್ಲಿ ನೋಟು ಬಂದ ಕಥೆ! ಎಸಿಬಿ ಅಧಿಕಾರಿಗಳು ಯಾವ್ಯಾವ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದರು, ಸಿಕ್ಕಿದ ಸಂಪತ್ತೆಷ್ಟು?
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನಿನ್ನೆ(ನ.24) ಬೆಳಗ್ಗೆಯಿಂದಲೇ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಗಳಿಕೆ ಪತ್ತೆಯಾಗಿದೆ.

ಹತ್ತು ತಿಂಗಳು ಕಳೆದರೂ ಮುಗಿಯದ ಪೈಪ್ ಲೈನ್ ಕಾಮಗಾರಿ; ಬನಶಂಕರಿ 6ನೇ ಹಂತದ ವಜ್ರಹಳ್ಳಿ ಸುತ್ತಮುತ್ತ ನಿವಾಸಿಗಳಿಗೆ ಸಂಕಷ್ಟ
ಬಿಡಬ್ಲ್ಯುಎಸ್ ಎಸ್ ಬಿ(BWSSB) ಯ ಪೈಪ್ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಬನಶಂಕರಿ 6ನೇ ಹಂತದ ವಜ್ರಹಳ್ಳಿ 100 ಅಡಿ ಮುಖ್ಯ ರಸ್ತೆಯನ್ನು ಜನರ ಸಂಚಾರಕ್ಕೆ ಮುಚ್ಚಿ 10 ತಿಂಗಳುಗಳಿಗಿಂತಲೂ ಹೆಚ್ಚಾಗಿದೆ. ಎರಡೂ ಮಾರ್ಗಗಳಲ್ಲಿ ಸಂಚಾರ ಈಗ ಕೇವಲ ಅರ್ಧದಷ್ಟು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಮತ್ತು ಫುಟ್‌ಪಾತ್ ಅತಿಕ್ರಮಣದಿಂದ ಸುತ್ತಮುತ್ತಲ ನಿವಾಸಿಗಳಿಗೆ ರಸ್ತೆ

ರಾಮನಗರ: ಪೈಪ್‌ಲೈನ್ ಒಳಗೆ ಸಿಲುಕಿಕೊಂಡ ರೈತ; ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
ತನ್ನ ಜಮೀನಿಗೆ ನೀರಿನ ಪೈಪ್ ಸಂಪರ್ಕಿಸಲು ಪೈಪ್‌ಲೈನ್ ಪ್ರವೇಶಿಸಿದ ರೈತನೊಬ್ಬ, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆತನನ್ನು ರಕ್ಷಿಸುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಅದೇ ಪೈಪ್‌ಲೈನ್ ನಲ್ಲಿ ಸಿಲುಕಿದ್ದ ಘಟನೆ ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿಡ್ಡೋಡಿ ಗ್ರಾಮದಲ್ಲಿ ನಡೆದಿದೆ.

ಗೃಹ ಮತ್ತು ವಾಣಿಜ್ಯ ಬಳಕೆಗೆ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಪೂರೈಸುವ ಮೇಘ ಗ್ಯಾಸ್
ಮನೆಗಳು ಮತ್ತು ವಾಣಿಜ್ಯ ಕಚೇರಿಗಳಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಯೋಜನೆಗೆ ಮೇಘ ...

