ಅಂಕಣಗಳುNew Year: ತುಳಿದೋಡುವ ಕಾಲಕ್ಕೆ ಮಾಯಿಸುವ ಶಕ್ತಿ ಎಷ್ಟಿದೆ? (ತೆರೆದ ಕಿಟಕಿ)
ಹೊಸತು ಎಂಬ ಅಲ್ಪವಿರಾಮದ ಕ್ಷಣದಲ್ಲಿ ನಿಂತಾಗ, ಎಲ್ಲರಲ್ಲೂ ಸಂಭ್ರಮವೇ ಇರಬೇಕು ಎಂದೇನಿಲ್ಲ. ಯಶದ ಸಾತತ್ಯ ಇದ್ದವರಿಗೆ ಹೊಸವರ್ಷದಲ್ಲಿ ಮತ್ತಷ್ಟು ಮಿನುಗುವ ಹಪಾಹಪಿ. ಆದರೆ, ಬದುಕೆಂಬುದು ಇನ್ಸ್ತಾಗ್ರಾಂ ಫೊಟೊ ಮತ್ತು ರೀಲ್ಸ್ ಗಳಲ್ಲಿ ಕಾಣುವಂತೆ ಎಲ್ಲ ಕಾಲಕ್ಕೂ ಖುಷಿ ಖುಷಿ ಏನಲ್ಲ.