ದೇಶಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ. 62.84 ರಷ್ಟು ಮತದಾನ
ಸೋಮವಾರ ನಡೆದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ 62. 84 ರಷ್ಟು ಮತದಾನವಾಗಿದೆ. 2019ರ ಚುನಾವಣೆಗೆ ಹೋಲಿಸಿದರೆ ಶೇ. 2. 5 ರಷ್ಟು ಕಡಿಮೆಯಾಗಿದೆ. ಆಗ ಶೇ. 65. 51 ರಷ್ಟು ಮತದಾನವಾಗಿತ್ತು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.