ದೇಶಪೆಗಾಸಸ್ ವಿವಾದ: ದಿಕ್ಕು ಬದಲಿಸಿದ ವಿಪಕ್ಷಗಳು, ಸಂಸತ್ತು ಬದಲು ಸುಪ್ರೀಂಕೋರ್ಟ್'ನಲ್ಲಿ ದನಿ ಎತ್ತಲು ನಿರ್ಧಾರ?
ಪೆಗಾಸಸ್ ಗೂಢಚರ್ಯೆ ಹಗರಣ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಷ್ಟೂ ದಿನ ಸಂಸತ್ತಿನಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದ ವಿರೋಧ ಪಕ್ಷಗಳು ಇದೀಗ ಸುಪ್ರೀಂಕೋರ್ಟ್ ನಲ್ಲಿ ದನಿ ಎತ್ತಲು ನಿರ್ಧರಿಸಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.