ವಿದೇಶಮಾಲಿಯಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೂವರು ಸ್ಫೋಟಕ್ಕೆ ಬಲಿ: ವಿಶ್ವಸಂಸ್ಥೆ ಮುಖ್ಯಸ್ಥರ ಖಂಡನೆ
ಮಾಲಿ ದೇಶದ ಉತ್ತರ ಭಾಗದ ಅಗ್ಯುಲೊಕ್ ಸಮೀಪ ಸುಧಾರಿತ ಸ್ಪೋಟಕ(ಐಇಡಿ) ಸ್ಫೋಟಿಸಿ ಗಸ್ತು ತಿರುಗುತ್ತಿದ್ದ ವಿಶ್ವಸಂಸ್ಥೆಯ ಮಾಲಿಯಲ್ಲಿನ ಬಹುಆಯಾಮ ಸಮಗ್ರ ಸ್ಥಿರತೆ ಮಿಷನ್(ಮಿನುಸ್ಮಾ) ಮಿಷನ್ ನ ಮೂವರು ಯೋಧರು ಮೃತಪಟ್ಟು ಇತರ ಹಲವರು ಗಾಯಗೊಂಡಿದ್ದಾರೆ.