ಕ್ರಿಕೆಟ್PBKS vs KKR: ಬೌಲರ್ಗಳನ್ನು ಕಾಪಾಡಿ ಎಂದ ರವಿಚಂದ್ರನ್ ಅಶ್ವಿನ್; ಕಾರಣವೇನು?
ಶುಕ್ರವಾರ ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆದ ಪಂಜಾಬ್ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಗಳು ನಿರ್ಮಾಣವಾದವು. ಈ ಹೈಸ್ಕೋರಿಂಗ್ ಪಂದ್ಯದ ನಂತರ 'ಕೆಟ್ಟ ಐಪಿಎಲ್' ಹ್ಯಾಶ್ಟ್ಯಾಗ್ ಎಕ್ಸ್ನಲ್ಲಿ ಟ್ರೆಂಡ್ ಆಯಿತು. ಭಾರತ ತಂಡದ ಹಿರಿಯ ಕ್ರಿಕೆಟಿಗ, ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ಟ್ವೀಟ್ ಮಾಡಿ, ಬೌಲರ್ಗಳನ್ನು ಉಳಿಸಿ ಎಂದರು.