ವಾಣಿಜ್ಯಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ: 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್ ವಿವರ ಸೋರಿಕೆ
ಭಾರತ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮೇಲೆ ಶುಕ್ರವಾರ ಬೃಹತ್ ಪ್ರಮಾಣದ ಸೈಬರ್ ದಾಳಿ ನಡೆದಿದೆ. ಇದರಲ್ಲಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಕಳವು ಮಾಡಲಾಗಿದೆ. ಕದ್ದ ದತ್ತಾಂಶವು ಪಾಸ್ಪೋರ್ಟ್ ಮತ್ತು ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸ್ಥೆ ಖಚಿತಪಡಿಸಿದೆ.