ದೇಶಶಿಕ್ಷಕರ ನೇಮಕಾತಿ ಹಗರಣ: ಇಡಿಯಿಂದ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ, ಸಹಚರೆ ಅರ್ಪಿತಾ ಮುಖರ್ಜಿ ಬಂಧನ
ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಬಂಧಿಸಿದೆ. ಹಗರಣ ನಡೆದಾಗ ರಾಜ್ಯ ಶಿಕ್ಷಣ ಸಚಿವರಾಗಿದ್ದ ಚಟರ್ಜಿ ಅವರನ್ನು ಸುಮಾರು 26 ಗಂಟೆಗಳ ಕಾಲ ತೀವ್ರ ತನಿಖೆಯ ನಂತರ ಇಂದು ಬಂಧಿಸಲಾಗಿದೆ.