ದೇಶರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗದ ರಾಹುಲ್ ಗಾಂಧಿ ಸೈನಿಕರ ಶೌರ್ಯ ಪ್ರಶ್ನಿಸುತ್ತಾರೆ: ಜೆ.ಪಿ.ನಡ್ಡಾ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೊಸ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ರಾಹುಲ್ ಗಾಂಧಿಯವರು ರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗಿಲ್ಲ. ಬದಲಾಗಿ ಭಾರತ-ಚೀನಾ ಗಡಿ ವಿವಾದ ಹೆಸರಿನಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಾ ಸೇನಾಪಡೆಯ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.