ದೇಶದೆಹಲಿ - ಕಾಬುಲ್ ಸ್ಪೈಸ್ ಜೆಟ್ ವಿಮಾನ ಸುತ್ತುವರಿದಿದ್ದ ಪಾಕ್ ಎಫ್-16, ಆತಂಕಗೊಂಡಿದ್ದ ಪ್ರಯಾಣಿಕರು!
ಕಳೆದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ನಂತರ ಭಾರತ - ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ದೆಹಲಿಯಿಂದ ಕಾಬುಲ್ಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ ಎರಡು ಎಫ್-16 ಯುದ್ಧ ವಿಮಾನಗಳು ಸುತ್ತುವರೆದಿದ್ದವು.