ಕ್ರಿಕೆಟ್ವಿಶ್ವಕಪ್ 2023: ಬೆಂಗಳೂರಿನಲ್ಲಿ ಪಾಕ್ ಗೆ ಒಲಿದ ಅದೃಷ್ಟ, ಕಿವೀಸ್ ವಿರುದ್ಧ 21 ರನ್ ಗೆಲುವು, ಸೆಮೀಸ್ ಆಸೆ ಜೀವಂತ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಅದೃಷ್ಟ ಒಲಿದಿದ್ದು, ಡಕ್ವರ್ತ್ ಲೂಯಿಸ್ ನಿಯಮ ಬಳಸಿ ನ್ಯೂಜಿಲೆಂಡ್ ತಂಡವನ್ನು 21 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.