ದೇಶಭಾರತ ಅಫ್ಘಾನಿಸ್ತಾನಕ್ಕೆ ಗೋಧಿ, ಜೀವ ರಕ್ಷಕ ಔಷಧ ಸಾಗಿಸಲು ಪಾಕ್ ಒಪ್ಪಿಗೆ
ವಾಘಾ ಗಡಿ ಮೂಲಕ ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆಲೆಯಲ್ಲಿ ಅಪ್ಘನ್ ಟ್ರಕ್ ಗಳಲ್ಲಿ 50 ಸಾವಿರ ಮೆಟ್ರಿಕ್ ಟನ್ ಗೋಧಿ ಮತ್ತು ಜೀವ ರಕ್ಷಕ ಔಷಧವನ್ನು ಭಾರತ ಸಾಗಿಸಲು ಪಾಕಿಸ್ತಾನ ಶುಕ್ರವಾರ ಒಪ್ಪಿಕೊಂಡಿದೆ. ಈ ಸಾಗಾಣಿಕೆ ವಿಚಾರವಾಗಿ ಉಭಯ ದೇಶಗಳ ನಡುವೆ ವಿವಾದ ತಲೆದೋರಿತ್ತು.