ಕ್ರೀಡೆ'ಸೋಲಿನ ನೋವನ್ನು ಮರೆತು ಇಂದು ಹೊಸದಾಗಿ ಪಂದ್ಯವನ್ನು ತೆಗೆದುಕೊಂಡು ಆಡಬೇಕು': ಪಿ ವಿ ಸಿಂಧು ತಂದೆ ರಮಣ ಮಾತು
ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಟೋಕಿಯೊ ಒಲಿಂಪಿಕ್ಸ್ ನ ಸೆಮಿ ಫೈನಲ್ ಹಂತದಲ್ಲಿ ಸೋಲು ಅನುಭವಿಸಿದ ಭಾರತದ ಆಟಗಾರ್ತಿ ಪಿ ವಿ ಸಿಂಧು ತಮ್ಮ ಸೋಲಿನಿಂದ ಕೂಡಲೇ ಹೊರಬಂದು ಭಾನುವಾರ ನಡೆಯಲಿರುವ ಪಂದ್ಯಕ್ಕೆ ಹೊಸ ಆರಂಭವನ್ನು ಕಂಡುಕೊಳ್ಳಬೇಕು ಎಂದು ಆಕೆಯ ತಂದೆ ರಮಣ ಹೇಳಿದ್ದಾರೆ.