ರಾಜ್ಯಮಾಜಿ ಸಿಎಂ ಬೊಮ್ಮಾಯಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ, ಇನ್ನು 4 ವಾರಗಳಲ್ಲಿ ಹೊರಗೆ ಓಡಾಡಬಹುದು: ವೈದ್ಯರು
ಕಳೆದ ಸೋಮವಾರ ಮೊಣಕಾಲಿನ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸ ಮತ್ತು ಧೈರ್ಯದ ಮನೋಭಾವದಿಂದ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ಗ್ರೂಪ್ ಆಸ್ಪತ್ರೆಗಳ ಕಾರ್ಡಿಯೋಥೊರಾಸಿಕ್ ಸೈನ್ಸ್ ಮುಖ್ಯಸ್ಥ ಡಾ ವಿವೇಕ್ ಜವಳಿ ಹೇಳುತ್ತಾರೆ.