Opposition leaders meeting

ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ, ಆ ಬಗ್ಗೆ ತಲೆ ಕೆಡಿಸಿಕೊಳ್ಳೋದು ಇಲ್ಲ, ನೋಡೋಣ ಮುಂದೇನಾಗುತ್ತದೆ: ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ನಮಗೆ ಆಹ್ವಾನವನ್ನು ನೀಡಿಲ್ಲ, ನಾಳೆಯ ಎನ್ ಡಿಎ ಮೈತ್ರಿಕೂಟ ಸಭೆಗೂ ಆಹ್ವಾನವಿಲ್ಲ, ನೋಡೋಣ ಮುಂದೆ ಏನಾಗುತ್ತದೆ ಎಂದು, ನಾವು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.

'ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ': ವಿಪಕ್ಷಗಳ ಸಭೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಟ್ವೀಟ್
ಇಂದಿನಿಂದ(ಜುಲೈ 17) ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷ ನಾಯಕರ ಸಭೆಯ ಆತಿಥ್ಯವನ್ನು ಕರ್ನಾಟಕದ ಕಾಂಗ್ರೆಸ್ ನಾಯಕರು ವಹಿಸಿಕೊಂಡಿದ್ದಾರೆ. ಇಂದು ರಾತ್ರಿ 24 ವಿಪಕ್ಷಗಳ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ವಿಪಕ್ಷ ನಾಯಕರ ಸಭೆ: ಜುಲೈ 17ರಂದು ಸಿಎಂ ಔತಣಕೂಟ ಏರ್ಪಾಡು
ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಭಾರೀ ಸ್ಪರ್ಧೆಯೊಡ್ಡಲು ಪರ್ಯಾಯ ಶಕ್ತಿ ರಚಿಸಲು ವಿಪಕ್ಷಗಳೆಲ್ಲಾ ಒಗ್ಗೂಡಲು ಮುಂದೆ ಬಂದಿದ್ದು ಎಲ್ಲಾ ಪ್ರತಿಪಕ್ಷ ನಾಯಕರುಗಳ ಎರಡನೇ ಸುತ್ತಿನ ಸಭೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ರಚಿಸಲು ಎಲ್ಲಾ ವಿಪಕ್ಷಗಳ ತಂತ್ರ: ಜುಲೈ 17-18ರಂದು ಸಭೆ
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್, ಸ್ಥಳೀಯ ಪಕ್ಷಗಳು ಸೇರಿದಂತೆ ವಿಪಕ್ಷಗಳು ಒಟ್ಟು ಸೇರಿ ತಂತ್ರ ಹೆಣೆಯಲು ಮುಂದಾಗಿದ್ದು ಅದರಂತೆ ಕಳೆದ ವಾರ ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಲಾಗಿತ್ತು.

ಜುಲೈ 13-14ರಂದು ನಿಗದಿಯಾಗಿದ್ದ ವಿಪಕ್ಷಗಳ ಸಭೆ ಮುಂದೂಡಿಕೆ: ಸಂಸತ್ತು ಮುಂಗಾರು ಅಧಿವೇಶನ ನಂತರ ಸಾಧ್ಯತೆ
ರಾಜಧಾನಿ ಬೆಂಗಳೂರಿನಲ್ಲಿ ಜುಲೈ 13-14ರಂದು ನಿಗದಿಯಾಗಿದ್ದ ವಿಪಕ್ಷಗಳ ಸಭೆ ಮುಂದೂಡಲಾಗಿದೆ. ಸಂಸತ್ತು ಮುಂಗಾರು ಅಧಿವೇಶನ, ಬಿಹಾರ ರಾಜ್ಯದ ವಿಧಾನಸಭೆ ಅಧಿವೇಶನ, ಕರ್ನಾಟಕದಲ್ಲಿ ಇಂದಿನಿಂದ 10 ದಿನಗಳ ಕಾಲ ಅಧಿವೇಶನ ಇತ್ಯಾದಿ ಕಾರಣಗಳಿಂದ ವಿಪಕ್ಷಗಳ ಸಭೆ ಮುಂದೂಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಕಾರ್ಯತಂತ್ರ: ಶಿಮ್ಲಾದಲ್ಲಿ ಮುಂದಿನ ಸಭೆ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಗುರಿ ಹೊಂದಿರುವ ವಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನಿಸಿವೆ. ಮುಂದಿನ ಹೋರಾಟಕ್ಕೆ ಜಂಟಿ ಕಾರ್ಯತಂತ್ರ ರೂಪಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಸಭೆ ಸೇರಲು ತೀರ್ಮಾನಿಸಿವೆ.

