ಅಂಕಣಗಳುಯಡಿಯೂರಪ್ಪ 'ಶಿಕಾರಿ'; ವಿರೋಧಿಗಳು ದಿಕ್ಕಾಪಾಲು! (ಸುದ್ದಿ ವಿಶ್ಲೇಷಣೆ)
ಶೆಟ್ಟರ್ ಪಕ್ಷಕ್ಕೆ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತ್ರ ಹಾಜರಿದ್ದರು. ರಾಜ್ಯದವರೇ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೈರು ಹಾಜರಿ ಅಕಸ್ಮಿಕವಂತೂ ಅಲ್ಲ.