ರಾಜ್ಯಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಒಪಿಡಿ ವೈದ್ಯರಿಗೆ ಪಿಪಿಇ ಕಿಟ್ ಇಲ್ಲ!
ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಹೊರರೋಗ ವಿಭಾಗದ ವೈದ್ಯರು ಪಿಪಿಇ ಕಿಟ್ ಗಳಿಲ್ಲದೆ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ರೋಗಿಗಳಿಗೆ ವೈದ್ಯೋಪಚಾರ ಮಾಡುವ ಸಮಯದಲ್ಲಿ ತಮಗೆ ಎಲ್ಲಿ ಕೊರೋನಾ ಸೋಂಕು ತಗುಲುತ್ತದೋ ಎಂಬ ಭಯ ಈ ವೈದ್ಯರನ್ನು ಅಪಾರವಾಗಿ ಕಾಡುತ್ತಿದೆ.