ದೇಶಒಎಲ್ ಎಕ್ಸ್ ನಲ್ಲಿ ಮತ್ತೊಂದು ರೀತಿಯ ವಂಚನೆ: 'ಆರ್ಮಿ ಆಫೀಸರ್' ಸೋಗಿನಲ್ಲಿ ಗ್ರಾಹಕರಿಂದ ಹಣ ಕೀಳುವ ಬಲೆ!
ಹಲವರು ಇತ್ತೀಚಿನ ದಿನಗಳಲ್ಲಿ ಹೊಸ ಸೈಬರ್ ಕ್ರೈಂ ವಂಚನೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ವಂಚನೆಗಾರರು ಭಾರತೀಯ ಸೇನೆಯ ಸಿಬ್ಬಂದಿ ಎಂದು ಹೇಳಿಕೊಂಡು ಇ-ಕಾಮರ್ಸ್ ವೆಬ್ ಸೈಟ್ ಒಎಲ್ ಎಕ್ಸ್ ನಲ್ಲಿ ಗ್ರಾಹಕರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ಕಳೆದ 45 ದಿನಗಳಲ್ಲಿ ಚೆನ್ನೈ ನಗರದ ವಿವಿಧ ಭಾಗಗಳಲ್ಲಿ 100ಕ್ಕೂ ಹೆಚ್ಚು ಇಂತಹ ವಂಚನೆ ಪ್ರಕರಣ ದೂರುಗಳು ದಾಖಲಾಗಿವೆ.