ರಾಜ್ಯಕಲಬುರಗಿ: ಕರ್ತವ್ಯ ಲೋಪ; ಕಿರಿಯ ಇಂಜಿನಿಯರ್ ಅಮಾನತು
ಪ್ರಾಧಿಕಾರದ ಆದೇಶವಿಲ್ಲದೇ ಕಲಬುರಗಿ ತಾಲೂಕಿನ ಪಟ್ಟಣ ಹೋಬಳಿಯ ಸೆಕ್ಟ್ರೆಲ್ ಮೆಜಿಸ್ಟ್ರೇಟ್ ಎಂದು ಕರ್ತವ್ಯ ನಿರ್ವಹಿಸಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಲಬುರಗಿ ಉಪವಿಭಾಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಕಿರಿಯ ಇಂಜಿನಿಯರ್ ಮಲ್ಲಿಕಾರ್ಜುನ ಮಾಲಿಪಾಟೀಲ ಅವರನ್ನು ಅಮಾನತುಗೊಳಿಸಲಾಗಿದೆ.