O panneer Selvam

ಟಿಡಿಪಿ ಸಮಸ್ಯೆಯನ್ನು ಕಾವೇರಿಗೆ ಹೋಲಿಕೆ ಮಾಡಬೇಡಿ: ತಮಿಳುನಾಡು ಡಿಸಿಎಂ ಒ ಪನ್ನೀರ್ ಸೆಲ್ವಂ
ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಸಮಸ್ಯೆಯನ್ನು ಕಾವೇರಿ ಸಮಸ್ಯೆಗೆ ಹೋಲಿಕೆ ಮಾಡಬೇಡಿ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಎಐಎಡಿಎಂಕೆಯಿಂದ ಟಿಟಿವಿ ದಿನಕರನ್ ಉಚ್ಛಾಟನೆ: ಶಶಿಕಲಾಗೂ ಗೇಟ್ ಪಾಸ್ ನೀಡಲು ಸಿದ್ಧತೆ!
ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಆಪ್ತ ಹಾಗೂ ಎಐಎಡಿಎಂಕೆ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡು ರಾಜಕೀಯದಲ್ಲಿ ಮತ್ತೆ ಸಂಚಲನ: ಪಳನಿ ಸ್ವಾಮಿ, ಪನ್ನೀರ್ ಸೆಲ್ವಂ ಬಣಗಳ ವಿಲೀನ!
ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ಭುಗಿಲೆದ್ದಿದ್ದ ಬಣ ರಾಜಕೀಯ ಅಂತೂ ನಿರ್ಣಾಯಕ ಹಂತ ತಲುಪಿದ್ದು, ಪನ್ನೀರ್ ಸೆಲ್ವಂ ಬಣ ಹಾಗೂ ಸಿಎಂ ಪಳನಿ ಸ್ವಾಮಿ ಬಣ ಪರಸ್ಪರ ವಿಲೀನಕ್ಕೆ ಸಮ್ಮತಿ ಸೂಚಿಸಿವೆ ಎಂದು ತಿಳಿದುಬಂದಿದೆ.

ಸಂಧಾನ ಯಶಸ್ವಿ; ಎಐಎಡಿಎಂಕೆಯಿಂದ ಚಿನ್ನಮ್ಮ-ದಿನಕರನ್ ಗೆ ಗೇಟ್ ಪಾಸ್ ಸಾಧ್ಯತೆ!
ನಿರೀಕ್ಷೆಯಂತೆಯೇ ತಮಿಳುನಾಡಿನಲ್ಲಿ ಇತಿಹಾಸ ಮರುಕಳಿಸಿದ್ದು, ಜಯಲಲಿತಾ ಅವರ ಸಾವಿನ ಬಳಿಕ ಇಬ್ಭಾಗವಾಗಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಒಂದಾಗಿದೆ.

ಶಕ್ತಿ ಪ್ರದರ್ಶನಕ್ಕೆ ಮುಂದಾದ ದಿನಕರನ್; ಬೆಂಬಲಿಗ ಶಾಸಕರ ಸಭೆ!
ಅತ್ತ ಪನ್ನೀರ್ ಸೆಲ್ವಂ ಹಾಗೂ ಪಳನಿ ಸ್ವಾಮಿ ಒಂದಾಗಿ ಶಶಿಕಲಾ ಮತ್ತು ತಂಡವನ್ನು ಪಕ್ಷದಿಂದ ಉಚ್ಛಾಟಿಸಲು ಮುಂದಾಗಿರುವಂತೆಯೇ ಇತ್ತ ಟಿಟಿವಿ ದಿನಕರನ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಶಶಿಕಲಾ ತಂಡದ ಉಚ್ಛಾಟನೆ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಜಯ: ಪನ್ನೀರ್ ಸೆಲ್ವಂ
ಶಶಿಕಲಾ ಮತ್ತು ಅವರ ತಂಡವನ್ನು ಎಐಎಡಿಎಂಕೆಯಿಂದ ಉಚ್ಛಾಟನೆ ಮಾಡಲು ನಿರ್ಧರಿಸಿರುವುದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದು ತಮಿಳುನಾಡು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬುಧವಾರ ಹೇಳಿದ್ದಾರೆ.

ಪಕ್ಷಕ್ಕೆ ಸಡ್ಡು ಹೊಡೆದ ದಿನಕರನ್; ಶಶಿಕಲಾ ಭೇಟಿ ಸಾಧ್ಯತೆ, ಅಗತ್ಯ ಬಿದ್ದರೆ ಡಿಎಂಕೆಯೊಂದಿಗೆ ಮೈತ್ರಿ?
ಅತ್ತ ತಾವೇ ಅಧಿಕಾರಕ್ಕೇರಿಸಿದ ಪಳನಿ ಸ್ವಾಮಿ ತಿರುಗಿ ಬಿದ್ದು ತಮ್ಮನ್ನೇ ಪಕ್ಷದಿಂದ ಉಚ್ಠಾಟನೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿರುವಂತೆಯೇ ಇತ್ತ ಪಕ್ಷಕ್ಕೆ ಸಡ್ಡು ಹೊಡೆದಿರುವ ಟಿಟಿವಿ ದಿನಕರನ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ..

ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ; ಎಐಎಡಿಎಂಕೆ ತುರ್ತು ಸಭೆ, ಶಶಿಕಲಾ ಬಣದ ಉಚ್ಛಾಟನೆ?
ತಮಿಳುನಾಡಿನಲ್ಲಿ ಮತ್ತೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಎಐಎಡಿಎಂಕೆ ಪಕ್ಷ ತನ್ನೆಲ್ಲಾ ಶಾಸಕರ ತುರ್ತು ಸಭೆ ನಡೆಸುತ್ತಿದ್ದು, ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಬಣದೊಂದಿಗೆ ಸಂಧಾನ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಪಕ್ಷದ ಚಿನ್ಹೆಗಾಗಿ ಒಗ್ಗೂಡಲು ಸಿದ್ಧರಾದ ಎಐಎಡಿಎಂಕೆ ಶಾಸಕರು, ಪನ್ನೀರ್ ಸೆಲ್ವಂಗೆ ಪ್ರಧಾನ ಕಾರ್ಯದರ್ಶಿ ಹುದ್ದೆ?
ಮತ್ತೊಂದು ರಾಜಕೀಯ ಹೈಡ್ರಾಮಾಕ್ಕೆ ತಮಿಳುನಾಡು ಸಾಕ್ಷಿಯಾಗಿದ್ದು, ಅಕ್ರಮ ಹಣ ಹಂಚಿಕೆ ಆರೋಪದ ಮೇರೆಗೆ ಆರ್ ಕೆ ನಗರ ಉಪ ಚುನಾವಣೆ ಮುಂದೂಡಿಕೆಯಾದ ಬೆನ್ನಲ್ಲೇ ಇಬ್ಭಾಗವಾಗಿರುವ ಎಐಎಡಿಎಂಕೆ ಪಕ್ಷವನ್ನು ಮತ್ತೆ ಒಗ್ಗೂಡಿಸಲು ಸಿಎಂ ಪಳನಿ ಸ್ವಾಮಿ ಮುಂದಾಗಿದ್ದಾರೆ.

