ವಿದೇಶಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಉತ್ತರ ಕೊರಿಯಾ ಉಲ್ಟಾ, ರಹಸ್ಯವಾಗಿ ಅಣ್ವಸ್ತ್ರ ಕಾಮಗಾರಿ: ವರದಿ
ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಒಪ್ಪಂದ ಮಾಡಿಕೊಂಡಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಅದಕ್ಕೆ ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಜಗದ ಕಣ್ಣಿಗೆ ಮಣ್ಣೆರಚಿ ರಹಸ್ಯವಾಗಿ ತನ್ನ ಅಣ್ವಸ್ತ್ರ ಯೋಜನೆಗಳನ್ನು ಮುಂದುವರೆಸಿದೆ ಎನ್ನಲಾಗಿದೆ.