ಕ್ರಿಕೆಟ್T20 ವಿಶ್ವಕಪ್ ಟೂರ್ನಿ ಮೇಲೆ ಉಗ್ರರ ಕರಿನೆರಳು: ಭಯೋತ್ಪಾದಕ ದಾಳಿ ಬೆದರಿಕೆ, ಭದ್ರತೆ ಹೆಚ್ಚಳ!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಬಾರಿಯ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಐಸಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ನಡುವಲ್ಲೇ ಅದ್ಧೂರಿ ಕ್ರೀಡಾಕೂಟದ ಮೇಲೆ ಉಗ್ರರ ಕರಿನೆರಳು ಬಿದ್ದಿದೆ.