ಸುದ್ದಿಗಳುಸಿಎಂ ಗದ್ದುಗೆ ಮೇಲೆ ಡಿ ಕೆ ಶಿವಕುಮಾರ್ ಕಣ್ಣು: ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ಪತ್ನಿ ಜೊತೆ ಬಂದ 'ಕನಕಪುರ ಬಂಡೆ'
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 136 ಸ್ಥಾನಗಳೊಂದಿಗೆ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರಿಗೆ ಇದು ಅದ್ವಿತೀಯ ಗೆಲುವಾಗಿದ್ದು, ಸಿಎಂ ಕುರ್ಚಿಯ ಮೇಲೆ ದೃಷ್ಟಿ ನೆಟ್ಟಿದ್ದಾರೆ.