ದೇಶಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂ ನಿರ್ಬಂಧಿಸುವ ಯೋಜನೆ ಇಲ್ಲ - ಕೇಂದ್ರ ಸರ್ಕಾರ
ಹೊಣೆಗಾರಿಕೆ ಸೇರಿದಂತೆ ಬಳಕೆದಾರರ ಸುರಕ್ಷತೆ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮ ಕಂಪನಿಗಳ ಜೊತೆಗೆ ನಿಯಮಿತವಾಗಿ ಸರ್ಕಾರ ಸಂವಾದ ನಡೆಸುತ್ತಿದ್ದು, ಪ್ರಸ್ತುತ ದೇಶದಲ್ಲಿ ಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂನ್ನು ನಿರ್ಬಂಧಿಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿಂದು ತಿಳಿಸಿತು.