ವಾಣಿಜ್ಯಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ: 10 ಕೋಟಿ ರೂ. ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲ
ಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇದರಿಂದ 10 ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಈ ಮೊದಲು ಒಟ್ಟು ವಹಿವಾಟು ಕನಿಷ್ಠ 20 ಕೋಟಿ ರೂಪಾಯಿ ಇದ್ದವರಿಗೆ ಈ ಲಾಭ ದೊರಕುತ್ತಿತ್ತು. ಆದರೆ ಈಗ ಸಣ್ಣ ಪ್ರಮಾಣದ ವ್ಯವಹಾರ ಮಾಡುವವರು ಕೂಡ ಲಾಭ ಪಡೆಯಬಹುದಾಗಿದೆ.