ದೇಶದೂರದರ್ಶನದ ಹೊಸ ಲೋಗೋಗೆ ಕೇಸರಿ ಬಣ್ಣ: ವ್ಯಾಪಕ ಟೀಕೆ
ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಹೊಸ ಲೋಗೋ ಪರಿಚಯಿಸಲಾಗಿದ್ದು, ಕೇಸರಿ ಬಣ್ಣ ನೀಡಲಾಗಿದೆ. ಈ ಹಿಂದೆ ಕೆಂಪು ಬಣ್ಣದಲ್ಲಿ ಲೋಗೋ ವಿನ್ಯಾಸ ಮಾಡಲಾಗಿತ್ತು. ಕೇಸರಿ ಬಣ್ಣದಲ್ಲಿ ಲೋಗೋ ವಿನ್ಯಾಸ ಮಾಡಲಾಗಿರುವುದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.